== ' ' == (೧೮೬೬-೧೯೫೪) ಈ ಸ್ಪಾನಿಷ್ ದೇಶದ ನಾಟಕಕಾರ, ೧೯೨೨ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್,' ರವರ ತಂದೆ ಕಾನೂನಿನಲ್ಲಿ ಶಿಕ್ಷಣಪಡೆದು ಅಭ್ಯಾಸಮಾಡುತ್ತಿದ್ದರು. ತಂದೆ ಆಪಾರ ಶ್ರೀಮಂತರು. ಅವರು ಮೃತರಾದಾಗ 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ರ ಬಳಿ ಅಪಾರ ಆಸ್ತಿಯನ್ನು ಬಿಟ್ಟುಹೋಗಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾದೇಶಗಳಲ್ಲಿ ದೀರ್ಘಕಾಲ ಪ್ರವಾಸಮಾಡಿ, ಲೋಕಾನುಭವವನ್ನು ಸಂಪಾದಿಸಿದರು. == ಮಾತೃ-ಭೂಮಿಗೆ ಮರಳಿದರು == 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ರವರು ಪುನಃ ತಮ್ಮ ಮಾತೃ-ಭೂಮಿ, ಸ್ಪೇನ್ ದೇಶಕ್ಕೆ ಬಂದಾಗ, ಅಲ್ಲಿನ ಸ್ಥಳೀಯ ನಿಯತಕಾಲಿಕಗಳಲ್ಲಿ ಅಂಕಣಗಳನ್ನು ಬರೆಯಲು ಪ್ರಾರಂಭಿಸಿದರು. ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದದ್ದು, ’ಹೆಂಗಸರ ಪತ್ರಗಳು,’ ಎಂಬ ಬರಗಳು. ಇವು ಆ ಪತ್ರಿಕೆಗಳಿಗೆ ’ವಾಚಕರವಾಣಿ’ ಯೆಂದು ಹೆಂಗೆಳೆಯರು ಬರೆದ ಪತ್ರಗಳಿಗೆ ತಮ್ಮ ವಿಚಾರಪೂರ್ಣ ಉತ್ತರಗಳನ್ನು ಬರೆದು ಅವರ ಸಮಸ್ಯೆಗಳಿಗೆ ಸಮಾಧಾನ ದೊರಕಿಸಿಕೊಡುತ್ತಿದ್ದರು. ಇದಾದ ಬಳಿಕ ಅವರ ಗಮನ ನಾಟಕ ರಚನೆಯಕಡೆಗೆ ತಿರುಗಿತು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್,' ರಚಿಸಿದ ೧೭೨ ನಾಟಕಗಳಲ್ಲಿ ಪ್ರಮುಖವಾದವುಗಳು. '' ' (1854) ' ' (1896) ' ' (1907), ; ' . . ' otoño' (1905), . 'Señora ' (1908), psicológico . ' ' (1913), . ' ' (1916), . ' armiño' (1916) ' ' (1924) ' voló ' (1926) ' ' (1928) ' ' (1929) ' pájaros' (1940) ' ' (1942) ' ' (1945) '' (1946) ' ' (1947) 'Abdicación' (1948) ' ' (1952) ' ' (1954) '' ' ಮುಂತಾದ ನಾಟಕಗಳು. == ಹಾಥಿಂಟಾ ರವರ ಸ್ಪಾನಿಷ್-ಭಾಷಾಪ್ರೇಮ ಅಪಾರವಾಗಿತ್ತು == 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್', ಸ್ಪಾನಿಷ್ ಭಾಷೆ, ಸಾಹಿತ್ಯಕ್ಕೆ, ಹಾಗೂ ಸ್ಪಾನಿಷ್ ಭಾಷೆಯ ರಂಗಭೂಮಿಯ ಬೆಳವಣಿಗೆಗೆ ಮಾಡಿದ ಸೇವೆ, ಅನನ್ಯವೆಂದು ಪರಿಗಣಿಸಲ್ಪಟ್ಟಿದೆ. ಅವರ ನಾಟಕ ಕೃತಿಗಳಲ್ಲಿ ಹಾಸ್ಯವಲ್ಲದೆ ಅದ್ಭುತ, ರಮ್ಯ-ಸನ್ನಿವೇಶಗಳನ್ನು ಹೆಣೆಯುವ ತಂತ್ರದಲ್ಲಿ ಅವರು ಸಿದ್ಧಿಪಡೆದಿದ್ದರು. ಅಂದಿನ ಸಮಾಜದ ಕುಂದು-ಕೊರತೆಗಳನ್ನು ಎತ್ತಿ ತೋರಿಸಿ ಕ್ಷ-ಕಿರಣಬೀರುತ್ತಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ಕೊನೆಯವರೆಗೂ ಅವಿವಾಹಿತರಾಗೇ ಉಳಿದಿದ್ದರು. ಸ್ಪಾನಿಷ್ ಭಾಷೆಯ ನಾಟಕಗಳಲ್ಲಿ ವಾಸ್ತವಿಕ ಅಂಶಗಳಿಗೆ ಒತ್ತುಕೊಡುವುದಲ್ಲದೆ, ಅತಿರಂಜಿತ ನಾಟಕೀಯ ಸಂಭಾಷಣೆಗಳನ್ನು ರಂಗಮಂಚದ ಮೇಲೆ, ತಂದಿದ್ದಲ್ಲದೆ, ಸಹಜಮಾತಿನ ಎಳೆಗಳಲ್ಲಿ ತಿಳುವಳಿಕೆಯ ಸಂದೇಶಗಳನ್ನೂ ಜೊತೆ-ಜೊತೆಯಾಗಿ ತರುತ್ತಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' 'ಮೆಲೋಡ್ರಾಮ' ದ ಜೊತೆಗೆ ಹಾಸ್ಯದ ಲೇಪವನ್ನೂ ಸೇರಿಸಿ, ಸಿದ್ಧ ಚೌಕಟ್ಟಿನ ಮಾದರಿಗಳನ್ನು ಮುಕ್ತ-ಪರಿಶೀಲನೆಗೆ ಒರೆಹಚ್ಚುವ ಕಡೆಗೆ ತಮ್ಮ ಒಳನೋಟವನ್ನು ತೋರಿಸುತ್ತಿದ್ದರು. ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಕೆಲವು ಒರಟು-ರಂಗಕ್ರಿಯೆಗಳನ್ನು ಸೂಕ್ಷ್ಮ ಬೌಧ್ದಿಕ ವಿವೇಚನೆಗಳಿಗೆ ಒಡ್ಡಿ, ಸ್ಪಾನಿಷ್ ಭಾಷೆಯ ರಂಗಭೂಮಿಯ ಸ್ಥರವನ್ನು ಉಚ್ಚಮಟ್ಟಕ್ಕೆ ಕೊಂಡೊಯ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ಎತ್ತರದ ಸ್ಥರದ ರಾಜಕೀಯ ಚಿಂತಕರೂ ಹೌದು. == ಮರಣ == 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್', ತಮ್ಮ ೮೭ ನೆಯ ವಯಸ್ಸಿನಲ್ಲಿ ಕಾಲವಶರಾದರು. == ಬಾಹ್ಯ ಸಂಪರ್ಕಗಳು == ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್ 2015-04-17 ವೇಬ್ಯಾಕ್ ಮೆಷಿನ್ ನಲ್ಲಿ. ಟೆಂಪ್ಲೇಟು: -. () 2008-10-15 ವೇಬ್ಯಾಕ್ ಮೆಷಿನ್ ನಲ್ಲಿ. , .